Tuesday, May 14, 2024
HomeCarsಕಂದಕಕ್ಕೆ ಉರುಳಿದ ಸ್ಕೋಡಾ ಕೊಡಿಯಾಕ್‌: ಪ್ರಯಾಣಿಕರು ಸೇಫ್‌

Related Posts

ಕಂದಕಕ್ಕೆ ಉರುಳಿದ ಸ್ಕೋಡಾ ಕೊಡಿಯಾಕ್‌: ಪ್ರಯಾಣಿಕರು ಸೇಫ್‌

ಕಾರುಗಳಲ್ಲಿ ಸುರಕ್ಷತಾ ಮಾನದಂಡಗಳು ಬಹುಮುಖ್ಯ ಎಂಬುದು ಇತ್ತೀಚೆಗಂತೂ ಪದೆ ಪದೇ ಸಾಬೀತಾಗುತ್ತಲೇ ಇದೆ. ಅದಕ್ಕೊಂದು ತಾಜಾ ಉದಾಹರಣೆ ಇತ್ತೀಚಿಗೆ ಘಟ್ಟ ಪ್ರದೇಶದಲ್ಲಿ ನಿಯಂತ್ರಣ ಕಳೆದುಕೊಂಡು 30 ಅಡಿ ಕಂದಕಕ್ಕೆ ಉಳಿದ ಸ್ಕೋಡಾ ಕೊಡಿಯಾಕ್‌!

ಸ್ಕೋಡಾ ಕೊಡಿಯಾಕ್‌  (Skoda Kodiaq) ಕಾರು ದೊಡ್ಡದೊಂದು ಅಪಘಾತಕ್ಕೀಡಾಗಿದ್ದರೂ,ಪ್ರಯಾಣಿಕರು ಸುರಕ್ಷಿತವಾಗಿರುವ ಘಟನೆ ವರದಿಯಾಗಿದೆ. ಪ್ರತೀಕ್ ಸಿಂಗ್ ಎಂಬುವವರು ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ, ಸ್ಕೋಡಾ ಕೊಡಿಯಾಕ್‌ ಒಂದು ದೊಡ್ಡ ಕಂದಕಕ್ಕೆ ಉರಳಿ ಕೆಳಗಿನ ನದಿಗೆ ಬಿದ್ದಿರುವುದನ್ನು ಕಾಣಬಹುದು.  ವಿಡಿಯೋ ಮಾಹಿತಿ ಪ್ರಕಾರ ಅಪಘಾತದ ವೇಳೆ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಕಾರಿನ ಮಾಲೀಕರು ತಮ್ಮ ಪತ್ನಿಯೊಂದಿಗೆ ಚಾಲನೆ ಮಾಡುತ್ತಿದ್ದರು.

ಕಾರಿನ ಮಾಲೀಕರು ಘಾಟ್‌ ಸೆಕ್ಷನ್‌ ಅಲ್ಲಿ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ,  ಓವರ್ ಟೇಕ್ ಸಂದರ್ಭದಲ್ಲಿ ಸ್ಟೀರಿಂಗ್ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಕೊಡಿಯಾಕ್ ಅನೇಕ ಪಲ್ಟಿ ಹೊಡೆದು ಕಂದಕಕ್ಕೆ ಜಾರಿ, ಸುಮಾರು 30 ಅಡಿಗಳಷ್ಟು ಕೆಳಗಿನ ನದಿಗೆ ಬಿದ್ದಿತು.

ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಲಭ್ಯವಿರುವ ಚಿತ್ರಗಳ ಪ್ರಕಾರ, ಕಾರಿಗೆ ಕೂಢ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಅದರ ಎ-ಪಿಲ್ಲರ್ ಇನ್ನೂ ಗಟ್ಟಿಯಾಗಿದ್ದು, ಕಾರಿನ ಮೇಲ್ಭಾಗ ತೆರೆದುಕೊಂಡಿಲ್ಲ ಎಂಬುದನ್ನು ಗಮನಿಸಬಹುದು.

ಸ್ಕೋಡಾ ಕೊಡಿಯಾಕ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದರಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್, ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ: ಪರ್ವತಗಳಲ್ಲಿ ಓವರ್‌ಟೇಕ್ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಹೆಚ್ಚಿನ ಜನರು ಬ್ಲೈಂಡ್‌  ಸ್ಪಾಟ್‌ ಹಿಂದಿಕ್ಕಲು ಪ್ರಯತ್ನಿಸುತ್ತಾರೆ, ಇದು ವಿರುದ್ಧ ದಿಕ್ಕಿನಿಂದ ಬರುವ ವಾಹನಗಳಿಗೆ ಮುಖಾಮುಖಿ ಡಿಕ್ಕಿಗಳಿಗೆ ಕಾರಣವಾಗಬಹುದು

LEAVE A REPLY

Please enter your comment!
Please enter your name here

Latest Posts

error: Content is protected !!