Wednesday, May 15, 2024
HomeCarsನಿಸಾನ್‌ ಮ್ಯಾಗ್ನೈಟ್‌ ರೆಡ್‌ ಆವೃತ್ತಿ 7.86 ಲಕ್ಷ ರೂ.ಗಳಿಗೆ ಲಭ್ಯ

Related Posts

ನಿಸಾನ್‌ ಮ್ಯಾಗ್ನೈಟ್‌ ರೆಡ್‌ ಆವೃತ್ತಿ 7.86 ಲಕ್ಷ ರೂ.ಗಳಿಗೆ ಲಭ್ಯ

DTF News

ಬೆಂಗಳೂರು, ಜುಲೈ 15, 2022: ನಿಸಾನ್‌ ಮೋಟಾರ್‌ ಇಂಡಿಯಾ ಇಂದು ನಿಸಾನ್‌ ಮ್ಯಾಗ್ನೈಟ್‌ ರೆಡ್ ಆವೃತ್ತಿ 7.86 ಲಕ್ಷ ರೂ.ಗಳಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ಘೋಷಿಸಿದೆ. ಈಗಾಗಲೇ ಇದರ  ಬುಕಿಂಗ್‌ ಆರಂಭಿಸಿದ್ದು,  ಅಧಿಕೃತವಾಗಿ ಜುಲೈ 18ರಂದು ಬಿಡುಗಡೆಗೊಳ್ಳಲಿದೆ.

ಈ ಹೊಸ ನಿಸಾನ್‌ ಮ್ಯಾಗ್ನೈಟ್‌ ರೆಡ್‌ ಆವೃತ್ತಿ 3 ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಮ್ಯಾಗ್ನೈಟ್‌ ಎಕ್ಸ್‌ವಿ ಎಂಟಿ (7.86 ಲಕ್ಷ ರೂ.), ಮ್ಯಾಗ್ನೈಟ್‌ ಟರ್ಬೋ ಎಕ್ಸ್‌ವಿ ಎಂಟಿ (9.24 ಲಕ್ಷ ರೂ.) ಮತ್ತು ಮ್ಯಾಗ್ನೈಟ್‌ ಟರ್ಬೋ ಎಕ್ಸ್‌ವಿ ಸಿವಿಟಿ (9.99 ಲಕ್ಷ ರೂ.)

ನಿಸಾನ್‌ ಮ್ಯಾಗ್ನೈಟ್‌ ರೆಡ್‌ ಆವೃತ್ತಿ, ಸದೃಢ ಹೊರಾಂಗಣಗಳು ಅದರ ವಿಭಿನ್ನ ಸೌಂದರ್ಯವನ್ನು ಹೆಚ್ಚಿಸಿದೆ, ಇದು ಮುಂಭಾಗದ ಗ್ರಿಲ್‌ನ ಕವರ್‌ ಮಾಡುವ ಕೆಂಪು ಬಣ್ಣದ ಗ್ರಿಲ್‌ಗಳು, ಮುಂದಿನ ಬಂಪರ್, ವ್ಹೀಲ್‌ ಆರ್ಚ್‌ ಮತ್ತು ಕಾರಿದ ಬದಿ ಭಾಗದ ಹೊದಿಕೆಗಳನ್ನು ಹೊಂದಿದೆ. ಹೊಸ ಆವೃತ್ತಿಯ ಪ್ರಮುಖ ವಿನ್ಯಾಸದ ಸೇರ್ಪಡೆಗಳು ಎಂದರೆ ಬೋಲ್ಡ್‌ ಬಾಡಿ ಗ್ರಾಫಿಕ್‌ಗಳು, ಹಿಂದಿನ ಬಾಗಿಲ ವಿನ್ಯಾಸ, ಎಲ್‌ಇಡಿ ಸ್ಕಫ್‌ ಪ್ಲೇಟ್‌ ಮತ್ತು ಆರ್‌ಇಡಿ ಎಡಿಷನ್‌ ಬ್ಯಾಡ್ಜ್‌ಗಳು. ಹೊಸ ಪೀಳಿಗೆಯ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಹೊಸ ಆವೃತ್ತಿಯಲ್ಲಿ ಸುಧಾರಿತ ಟೆಕ್‌ ಅಂಶಗಳನ್ನು ಅಳವಡಿಸಲಾಗಿದೆ. ಇದು ವೈರ್‌ಲೆಸ್‌ ಚಾರ್ಜರ್‌ ಮತ್ತು ಒಂದು ಆ್ಯಂಬಿಯೆಂಟ್‌ ಲೈಟಿಂಗ್‌ಗಳನ್ನು ಒಳಗೊಂಡಿದೆ.

ನಿಸಾನ್‌ ಮ್ಯಾಗ್ನೈಟ್‌ ರೆಡ್ ಎಡಿಷನ್‌ ಹೆಚ್ಚು ಜನಪ್ರಿಯತೆ ಪಡೆದಿರುವ ಎಕ್ಸ್‌ವಿ ವೇರಿಯಂಟ್‌ ಮೇಲೆ ಅವಲಂಬಿತವಾಗಿದೆ. ಇದು 8.0 ಟಚ್‌ ಸ್ಕ್ರೀನ್‌, ವೈಫೈ ಕನೆಕ್ಟಿವಿಟಿ, 7.0 ಪೂರ್ಣ ಟಿಎಫ್‌ಟಿ ಇನ್‌ಸ್ಟ್ರೂಮೆಂಟ್‌ ಕ್ಲಸ್ಟರ್‌, ಎಲ್‌ಇಡಿ, ಡಿಆರ್‌ಎಲ್‌ಗಳು, ಆರ್‌16 ಡೈಮಂಡ್‌ ಕಟ್‌ ಅಲಾಯ್‌ ಚಕ್ರಗಳು ಇತ್ಯಾದಿಗಳನ್ನು ಒಳಗೊಂಡಿದೆ.

ನಿಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ, “ನಮ್ಮ ಹೊಸ ನಿಸ್ಸಾನ್ ಮ್ಯಾಗ್ನೈಟ್ ರೆಡ್ ಆವೃತ್ತಿಯ ಬುಕಿಂಗ್ ಅನ್ನು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ಬಿಗ್, ಬೋಲ್ಡ್, ಬ್ಯೂಟಿಫುಲ್ ಎಸ್‌ಯುವಿ ಮ್ಯಾಗ್ನೈಟ್ ಭಾರತೀಯ ಮಾರುಕಟ್ಟೆಗೆ ನಿಸ್ಸಾನ್‌ನ ಜಾಗತಿಕ ಎಸ್‌ಯುವಿ ಪರಂಪರೆಯ ಮೌಲ್ಯವನ್ನು ಎತ್ತಿಹಿಡಿಯಲಿದೆ. ನಿಸ್ಸಾನ್ ಮ್ಯಾಗ್ನೈಟ್ ರೆಡ್‌ನ ದಪ್ಪ ವಿನ್ಯಾಸ, ಪವರ್-ಪ್ಯಾಕ್ಡ್ ಕಾರ್ಯಕ್ಷಮತೆ, ಸೌಕರ್ಯ, ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಪರ್ಕ ವೈಶಿಷ್ಟ್ಯಗಳು ಗ್ರಾಹಕರನ್ನು ಆಕರ್ಷಿಸುತ್ತದೆ ಎಂಬ ವಿಶ್ವಾಸವಿದೆ” ಎಂದರು.

ನಿಸ್ಸಾನ್ ಇತ್ತೀಚೆಗೆ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಎಂವೈ22 ಬಿಡುಗಡೆಗೊಳಿಸಿದೆ. ಇದರಲ್ಲಿ ಡ್ಯುಯಲ್ ಹಾರ್ನ್, ಶಾರ್ಕ್ ಫಿನ್ ಆಂಟೆನಾ, ಮತ್ತು ಪಿಎಂ2.5 ಫಿಲ್ಟರ್, ಇನ್-ಕ್ಯಾಬಿನ್ಗಳು ಸವಾರರಿಗೆ ಅತ್ಯುತ್ತಮ ಸವಾರಿಯ ಅನುಭವ ನೀಡುತ್ತದೆ.

ಇತರ ಪ್ರಮುಖ ವೈಶಿಷ್ಟ್ಯಗಳು: ವೈಫೈ ಸಂಪರ್ಕದೊಂದಿಗೆ 8.0 ಟಚ್‌ಸ್ಕ್ರೀನ್, 7.0 ಪೂರ್ಣ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಡಿಆರ್‌ಎಲ್‌ಗಳು, ಆರ್‌16 ಡೈಮಂಡ್ ಕಟ್ ಅಲಾಯ್ ವೀಲ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, LED ಫಾಗ್ ಲ್ಯಾಂಪ್, ವೆಹಿಕಲ್ ಡೈನಾಮಿಕ್ಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಬ್ರೇಕ್ ಅಸಿಸ್ಟ್, ಹಿಲ್ ಸ್ಟಾರ್ಟ್ ಅಸಿಸ್ಟ್ ಇತ್ಯಾದಿಗಳು.

ಪೂರ್ವ-ಬುಕಿಂಗ್‌ಗಳು ಈಗ ನಿಸ್ಸಾನ್ ಡೀಲರ್‌ಶಿಪ್‌ಗಳಲ್ಲಿ, ರಾಷ್ಟ್ರವ್ಯಾಪಿ ಮತ್ತು ನಿಸ್ಸಾನ್‌ನ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ಬುಕ್‌ ಮಾಡಬಹುದು: https://book.nissan.in/.

LEAVE A REPLY

Please enter your comment!
Please enter your name here

Latest Posts

error: Content is protected !!