Tuesday, May 14, 2024
HomeOLD is Gold3 ಕಿಮೀ ಮೈಲೇಜ್‌ ನೀಡುತ್ತೆ 3 ಟನ್‌ ತೂಕದ ಕಾರು !!

Related Posts

3 ಕಿಮೀ ಮೈಲೇಜ್‌ ನೀಡುತ್ತೆ 3 ಟನ್‌ ತೂಕದ ಕಾರು !!

ಬೆಂಗಳೂರು: ವಿಂಟೇಜ್‌ ಕಾರುಗಳಲ್ಲೇ ಅತ್ಯಂತ ವಿಶೇಷ ಹಾಗೂ ದುಬಾರಿ ಕಾರುಗಳ ಪಟ್ಟಿಯಲ್ಲಿ ಪ್ರಮುಖವಾಗಿ ನಿಲ್ಲುವುದು ಸೂಪರ್‌ ಬ್ಯೂಕ್‌ 8 ಕಾರುಗಳು. ಇದರ ತೂಕವೆಷ್ಟು ಗೊತ್ತೆ? ಬರೋಬ್ಬರಿ 3 ಟನ್‌.

ಸಾಲಾಗಿ 8 ಸಿಲಿಂಡರ್‌ ಹೊಂದಿರುವ ಉದ್ದದ ಬ್ಯಾನೆಟ್‌ ಇದರ ವಿಶೇಷ. ಇದರ ನಿರ್ವಹಣೆ ಕೂಡ ಒಂದು ಸವಾಲಾಗಿದ್ದು, ಲೀಟರ್‌ಗೆ ಕೇವಲ 3 ಟನ್ ಮೈಲೇಜ್‌ ನೀಡುವುದರಿಂದ ಈ ಕಾರನ್ನು ಹೊಂದಿರುವುದು ಐಷಾರಾಮಿ ಕಾರುಗಳಷ್ಟೇ ಮಹತ್ವ ಪಡೆಯುತ್ತದೆ.

ಅಮೆರಿಕ ಮೂಲದ ಸೂಪರ್‌ ಬ್ಯೂಕ್‌  8 ಕಾರುಗಳ ಉತ್ಪಾದನೆ 1930ರಲ್ಲೇ ಆರಂಭಗೊಂಡತ್ತಾದರೂ, ಅದರ ಮೊದಲ ಪೂರ್ಣ ಪ್ರಮಾಣದ ಕಾರು ಮಾರುಕಟ್ಟೆಗೆ ಪರಿಚಯವಾಗಿದ್ದು 1940ರಲ್ಲಿ. ನಂತರ 1958ರವರೆಗಿನ 18 ವರ್ಷಗಳ ಅವಧಿಯಲ್ಲಿ ಈ ಕಾರು 7ಕ್ಕೂ ಹೆಚ್ಚು ಬಾರಿ ಹಲವು ಮಾರ್ಪಾಡುಗಳನ್ನು ಕಂಡಿದೆ.

ಇದು ಇಷ್ಟು ಕಡಿಮೆ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡಿರುವ ಮೊದಲ ಕಾರಾಗಿದೆ. ಆದರೆ, 1958ರ ನಂತರ ಈ ಕಾರುಗಳ ಉತ್ಪಾದನೆ ಸ್ಥಗಿತಗೊಂಡಿತ್ತು. ನಂತರ, ದೀರ್ಘಾವಧಿಯ ಗಡುವಿನ ನಂತರ, 2008ರಿಂದ 2011ರ ಅವಧಿಯಲ್ಲಿ ವಿ 8 ಪವರ್ಡ್‌ ಲ್ಯಾಕ್ರೋಸ್‌ ಮತ್ತು ಲ್ಯೂಕ್ರೇನ್‌ ಸೆಡಾನ್‌ ಕಾರುಗಳನ್ನು ಉತ್ಪಾದಿಸಲಾಗಿತ್ತು. ಇದು ಇಲ್ಲಿಯವರೆಗೆ ಲಭ್ಯವಿರುವ ಇತ್ತೀಚಿನ ಕಾರುಗಳಾಗಿವೆ.

ಸೂಪರ್‌ 8 ಬ್ಯೂಕ್‌ ಕಾರು ತಯಾರಾಗಿದ್ದು, 1942-1948ರ ಅವಧಿಯಲ್ಲಿ. ಈ ಕಾರು 1947ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಈ ಕಾರು ಅಂದಿನ ಕಾಲದಲ್ಲಿ ಅಮೆರಿಕನ್ನರ ಅತಿ ಪ್ರಿಯ ಕಾರಾಗಿತ್ತು. ಇದು ಬಿಡುಗಡೆಯಾದ ವರ್ಷದಲ್ಲೇ 1.59 ಲಕ್ಷ ಕಾರುಗಳು ಮಾರಾಟವಾಗಿದ್ದವು.

ಈ ಸೂಪರ್‌ ಬ್ಯೂಕ್‌ ದೊಡ್ಡ ರಿಂಗ್‌ಮಾಸ್ಟರ್‌ ರೂಂ ಹಾಗೂ ಎಕಾನಮಿಕಲ್‌ ಸ್ಪೆಷಲ್‌ ಇಂಜಿನ್‌ ಅನ್ನು ಒಳಗೊಂಡಿದ್ದು, ಇದರಲ್ಲಿ 1946ರಲ್ಲಿ ಬಿಡುಗಡೆ ಕಂಡ ಕಾರಿನ ಫೀಚರ್ ಗಳನ್ನೇ ಮುಂದುವರಿಸಲಾಗಿದೆ. ಜೊತೆಗೆ, ಎರಡು ಮೇಲಿನ ಬಾರ್‌ ಹಾಗೂ ಹೊಸ ಎಂಬ್ಲೆಮ್‌ ಹೊಂದಿರುವ ಹೊಸ ಸ್ಟಾಂಪ್‌ ಗ್ರಿಲ್ ಅನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ. ಜೊತೆಗೆ, ಎದುರಿನ ಸ್ಟಾಂಡರ್ಡ್‌ ಬಂಪರ್‌ ಗಾರ್ಡ್‌ಗಳ ನಡುವೆ ಕ್ರಾಸ್‌ಬಾರ್‌ಗಳಲ್ಲಿ ಹೊರಗಿನ ಸೀರಿಸ್‌ ಗುರುತು ಕೂಡ ಇದೆ.

ಎರಡು ಪದರದ ಡ್ಯಾಶ್‌ಬೋರ್ಡ್‌ಗೆ ಅಳವಡಿಸಿದ ಬಿಳಿ ಟಿನೈಟ್‌ ಸ್ಟಾಂಡರ್ಡ್‌ ವೃತ್ತಾಕಾರದ ಸ್ಟೇರಿಂಗ್‌ ವ್ಹೀಲ್‌ ನಿಮಗೆ ಭಾರತದ ಹಳೆಯ ಅಂಬಾಸಿಡರ್‌ ಕಾರನ್ನು ನೆನಪಿಸುತ್ತದೆ. ಇದು ಪವರ್‌ ಸ್ಟೇರಿಂಗ್‌ ಅಲ್ಲದ ಕಾರಣ, ಹೆಚ್ಚು ಬಲ ಪ್ರಯೋಗಿಸಿ ಸ್ಟೇರಿಂಗ್‌ ತಿರುಗಿಸಬೇಕಾಗುತ್ತದೆ. ಮತ್ತು ಇದರಲ್ಲಿ ಎಲ್ಲಾ ವಿಂಟೇಜ್‌ ಕಾರುಗಳಂತೆ ಹ್ಯಾಂಡ್‌ ಗೇರ್‌ ಹಾಗೂ ಇಂಡಿಕೇಟರ್‌ ಕೂಡ ಸ್ಟೇರಿಂಗ್‌ ಬಳಿಯೇ ಸಿಗುತ್ತದೆ.

ಇದು ಮೂರು ಗೇರುಗಳ ಕಾರಾಗಿದೆ. ಒಂದರಿಂದ ಮೂರು ಹಾಗೂ ರಿವರ್ಸ್‌ ಹಾಗೂ ನ್ಯೂಟ್ರಲ್‌ ಗೇರುಗಳು ಹ್ಯಾಂಡ್‌ ಗೇರ್‌ನಲ್ಲಿಯೇ ಒದಗಿಸಲಾಗಿದೆ.

ವಿಂಟೇಜ್‌ ಮತ್ತು ಕ್ಲಾಸಿಕ್‌ ಕಾರುಗಳ ಬಗ್ಗೆ ಆಸಕ್ತಿಯುಳ್ಳವರಿಗೆ ಈ ಲೇಖನ ಉಪಯುಕ್ತವಾಗಬಲ್ಲದು. ವಿಂಟೇಜ್‌ ಕಾರುಗಳ ಸಂಗ್ರಹಗಳ ಬಗ್ಗೆ ಹೆಚ್ಚು ತಿಳಿಯಲು ನಮಗೆ ಮೇಲ್‌ ಮಾಡಬಹುದು.

ಇತರ ವೈಶಿಷ್ಟ್ಯಗಳು:  

  • 3 ಮ್ಯಾನ್ಯುವಲ್‌ ಗೇರ್‌
  • ಉದ್ದ- 212 ಇಂಚು
  • ಅಗಲ-78.6 ಇಂಚು
  • ಎತ್ತರ-6.67 ಇಂಚು
  • ಮುಂಭಾಗದ ವೈಶಿಷ್ಟ್ಯಗಳು- ಸ್ವಯಂಚಾಲಿತ ಚೋಕ್‌, ಗಡಿಯಾರ, ಆ್ಯಶ್‌ ರಿಸೀವರ್‌, ತಿರುಗುವ ಸಿಗ್ನಲ್‌ಗಳು, ರೆಡ್‌ಲೈನ್‌ ಇಂಡಿಕೇಟರ್‌, ಇಂಜಿನ್‌ ಬಿಸಿಯ ಸಾಮರ್ಥ್ಯ ಬಿಂಬಿಸುವ ಮೀಟರ್‌, ಪೆಟ್ರೋಲ್‌ ಇಂಡಿಕೇಟರ್‌.
  • ವಿನ್ಯಾಸ- ಹರ್ಲೇ ಎರ್ಲ್
  • ಮೈಲೇಜ್‌- 3 ಕಿಲೋಮೀಟರ್‌ ಪ್ರತಿ ಗಂಟೆಗೆ
  • ಇಂಜಿನ್‌ -4300 ಸಿಸಿ
  • 8 ಸಿಲಿಂಡರ್‌ಗಳು

LEAVE A REPLY

Please enter your comment!
Please enter your name here

Latest Posts

error: Content is protected !!