Tuesday, May 14, 2024
HomeElectric Vehicleಬೆಂಗಳೂರಿನಲ್ಲಿ 50 ಪಾಯಿಂಟ್‌ಗಳ ಪಬ್ಲಿಕ್‌ ಇವಿ-ಚಾರ್ಜಿಂಗ್‌ ಹಬ್‌ ಆರಂಭ

Related Posts

ಬೆಂಗಳೂರಿನಲ್ಲಿ 50 ಪಾಯಿಂಟ್‌ಗಳ ಪಬ್ಲಿಕ್‌ ಇವಿ-ಚಾರ್ಜಿಂಗ್‌ ಹಬ್‌ ಆರಂಭ

ಬೆಂಗಳೂರು: ದೇಶದಲ್ಲಿ ಎಲೆಕ್ಟ್ರಿಕ್‌ ವಾಹನ (EV) ಅಳವಡಿಕೆಯನ್ನು ಉತ್ತೇಜಿಸುವ ಹಾಗೂ ಚಾರ್ಜಿಂಗ್‌ ಸೌಲಭ್ಯವನ್ನು ಎಲ್ಲರಿಗೂ ಲಭ್ಯವಾಗಿಸುವ ಉದ್ದೇಶದಿಂದ ಫೋರ್ಟಮ್ ಚಾರ್ಜ್‌ ಮತ್ತು ಡ್ರೈವ್‌ ಇಂಡಿಯಾ, ಬೆಂಗಳೂರಿನ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ 50 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಆರಂಭಿಸುವ ಮೂಲಕ ಇವಿ- ಸಾರ್ವಜನಿಕ ಹಬ್‌ (EV-Public hub) ಆರಂಭಿಸಿದೆ.

ಇಲ್ಲಿ ಕಾರುಗಳು ಮಾತ್ರವಲ್ಲ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳನ್ನೂ ಚಾರ್ಜ್ ಮಾಡಬಹುದಾಗಿದೆ. ಈ ಕೇಂದ್ರ ಹತ್ತು 60 ಕೆಡಬ್ಲ್ಯು ಸಿಸಿಎಸ್‌ ಚಾರ್ಜಿಂಗ್‌ ಪಾಯಿಂಟ್‌ಗಳು, ನಾಲ್ಕು 15 ಕೆಡಬ್ಲ್ಯು ಡಿಸಿ001 ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಮೂವತ್ತಾರು 7.4 ಕೆಡಬ್ಲ್ಯು ಟೈಪ್-2 ಎಸಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಏಕಕಾಲದಲ್ಲಿ 50 ಕಾರುಗಳಿಗೆ ಚಾರ್ಜ್ ಮಾಡಲು ಅವಕಾಶ ಕಲ್ಪಿಸುತ್ತದೆ.

ಇವಿ ಬಳಕೆದಾರರು ಫೋರ್ಟಂ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಇವಿ-ಚಾರ್ಜಿಂಗ್ ಕೇಂದ್ರಗಳನ್ನು ಹುಡುಕಬಹುದು ಮತ್ತು ಆ್ಯಪ್‌ ಮೂಲಕವೇ ಡಿಜಿಟಲ್‌ ಪಾವತಿ ಮಾಡಬಹುದು. ಈ ಅಪ್ಲಿಕೇಶನ್ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು ಹಬ್ ಅನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬೆಂಗಳೂರು ನಗರವು 45,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಬಳಕೆದಾರರನ್ನು ಹೊಂದಿದೆ, ಇದು ಇವಿಗಳ (ಎಲೆಕ್ಟ್ರಿಕ್ ವಾಹನಗಳು) ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಧೇಶ್ ಝಾ, ” 2017 ರಲ್ಲಿ ಹೈದರಾಬಾದ್‌ನಲ್ಲಿ ಆರಂಭಗೊಂಡ ಕಂಪನಿ ಈಗ ಇತರ ನಗರಗಳಿಗೆ ವಿಸ್ತರಿಸಿದೆ. ಬೆಂಗಳೂರು ನಮ್ಮ ಪ್ರಮುಖ ನಗರಗಳಲ್ಲಿ ಒಂದಾಗಿದೆ. 2022 ರ ಅಂತ್ಯದ ವೇಳೆಗೆ ನಗರದಲ್ಲಿ 200 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಇದು ಸುಸ್ಥಿರ ಸಾರಿಗೆಯತ್ತ ಸಾಗುವ ಪ್ರಯಾಣದಲ್ಲಿ ಬೆಂಗಳೂರಿನ ಪ್ರಮುಖ ಮೈಲಿಗಲ್ಲಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫೋರಮ್ ನೈಬರ್‌ಹುಡ್ ಮಾಲ್‌ನ ಕೇಂದ್ರದ ಮುಖ್ಯಸ್ಥರಾದ ಅನಂತ್ ಪಾಟೀಲ್ ಮಾತನಾಡಿ, “ನೆಕ್ಸಸ್ ಮಾಲ್‌ಗಳಲ್ಲಿ ನಮ್ಮ ವ್ಯಾವಹಾರಿಕ ಮಾದರಿಯನ್ನು ಪರಿಸರ, ಸಾಮಾಜಿಕ ಮತ್ತು ಆಡಳಿತದ ಅಂಶಗಳೊದಿಗೆ ಪರಿಚಯಿಸುವ ಗುರಿ ಹೊಂದಿದ್ದೇವೆ” ಎಂದರು.

ಸದ್ಯ  ಫೋರ್ಟಮ್‌ 188 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. 8 ರಾಜ್ಯಗಳು ಮತ್ತು 13 ನಗರಗಳಲ್ಲಿ ಮತ್ತು ಯಾವುದೇ ಇವಿ ಬಳಕೆದಾರರಿಗೆ ಲಭ್ಯವಿರಲಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!