Tuesday, May 14, 2024
HomeReviewಹೊಸ ತಂತ್ರಜ್ಞಾನ, ಹೊಸ ವೇಗದ ರಾಯಲ್ ಎನ್ಫೀಲ್ಡ್ ‘ಹಿಮಾಲಯನ್’

Related Posts

ಹೊಸ ತಂತ್ರಜ್ಞಾನ, ಹೊಸ ವೇಗದ ರಾಯಲ್ ಎನ್ಫೀಲ್ಡ್ ‘ಹಿಮಾಲಯನ್’

ಚಾಲನಾ ಅನುಭವ-ಸುಪ್ರೀತಾ ಹೆಬ್ಬಾರ್

ಬೆಂಗಳೂರು: ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ಗಳು ಹಲವು ವರ್ಷಗಳಿಂದ ಭಾರಿ ಸುಧಾರಣೆ ಕಂಡಿವೆ. ಈಗ ಹೊಸದಾಗಿ ಬಿಡುಗಡೆಗೊಂಡಿರುವ ಹಿಮಾಲಯನ್‌ ಮಾದರಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದೆ.

ಬೈಕ್‌ನ ವಿನ್ಯಾಸ ಬಹುತೇಕ ಹಳೆ ಹಿಮಾಲಯನ್‌ ಬೈಕ್‌ನಂತೆಯೇ ಇದೆ. ಆದರೆ, ಹ್ಯಾಂಡಲ್‌ ಹಾಗೂ ಗ್ರಿಡ್‌ಗಳು ಮೊದಲಿಗಿಂತಲೂ ಸದೃಢವಾಗಿವೆ. ಈ ಬೈಕ್‌ನ ಬ್ಯಾಟರಿ ಸಂಪೂರ್ಣವಾಗಿ ತೆಗೆಯುವ ಅವಕಾಶ ಕಲ್ಪಿಸಲಾಗಿದೆ.

ಹಿಮಾಲಯನ್‌ ಬೈಕ್‌ ಇತ್ತೀಚೆಗಷ್ಟೇ ಬಿಎಸ್‌ 4ರಿಂದ ಬಿಎಸ್‌6 ಇಂಜಿನ್‌ಗೆ ಪರಿಷ್ಕರಣೆಯಾಗಿದೆ. 24.3 ಬಿಎಚ್‌ಪಿ ಪವರ್‌ ಮತ್ತು 32 ಎನ್‌ಎಂ ಟಾರ್ಕ್‌ ಉತ್ತಮ ವೇಗ, ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಹಿಂದೆ ಮತ್ತು ಮುಂದಿನ ಡ್ಯುಯಲ್‌ ಡಿಸಕ್‌ ಬ್ರೇಕ್‌ ಹೊಂದಿರುವ ಈ ಬೈಕ್‌ ಆ್ಯಂಟಿ ಬ್ರೇಕಿಂಗ್ ಸಿಸ್ಟಮ್‌ ಒಳಗೊಂಡಿದೆ. ಮುಂದಿನ ಟ್ಯೂಬ್‌ ಟಯರ್ 21 ಹಾಗೂ ಹಿಂದಿನ ಟರ್ 17 ಇಂಚುಗಳಷ್ಟು ಅಗಲ ಇರುವುದರಿಂದ ಕಡಿದಾದ ರಸ್ತೆಗಳಲ್ಲಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ.

ಜೊತೆಗೆ, ಹಿಮಾಲಯನ್‌ ಬೈಕ್‌ನ ಸಿಗ್ನೇಚರ್‌ ಸ್ಟೈಲ್‌ ಎಂದೇ ಗುರುತಿಸಲ್ಪಡುವ ಅದರ ಲಗೇಜ್ ರ್ಯಾಕ್‌ ರೈಡರ್‌ಗಳ ಸ್ನೇಹಿಯಾಗಿವೆ. ಆದರೆ, ಸೀಟ್‌ ಎತ್ತರ 800 ಎಂಎಂ ಇರೋದ್ರಿಂದ ಎತ್ತರ ಕಡಿಮೆ ಇರುವ ರೈಡರ್‌ಗಳಿಗೆ ಇದನ್ನು ನಿಭಾಯಿಸುವುದು ಕಷ್ಟವಾಗಬಹುದು.ಆದರೆ, ಹಿಂದಿನ ಮಾದರಿಗಳಿಗೆ ಹೋಲಸಿಇದರೆ, ಇದರ ಸೀಟಿಂಗ್‌ನ ಕುಷನ್‌ ಹಾಗೂ ಡಿಸೈನ್‌ ಉತ್ತಮವಾಗಿವೆ.

15 ಲೀಟರ್ ಇಂಧನ ಟ್ಯಾಂಕ್, ಸ್ಪೀಡೋಮೀಟರ್, ಚಲನೆಯ ದಿಕ್ಕು ತೋರಿಸುವ ಮೀಟರ್‌ ಹಾಗೂ ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಮೀಟಿಯೋರ್‌ 350ಯಲ್ಲಿ ಮೊದಲ ಬಾರಿಗೆ ಅಳವಡಿಕೆಯಾದ ಟ್ರಿಪ್ಪರ್‌ ನ್ಯಾವಿಗೇಟರ್, ವಿಂಡ್‌ಶೀಲ್ಡ್‌ ಡಿಸೈನ್‌ಗಳು ಹಿಮಾಲಯನ್ 2021 ಅನ್ನು ಭಿನ್ನವಾಗಿಸುತ್ತಿದೆ. ಚಾಲಕರು ತಮ್ಮ ಮೊಬೈಲ್‌ನಲ್ಲಿ ರಾಯಲ್‌ ಎನ್‌ಫೀಲ್ಡ್‌ ಆ್ಯಪ್‌ನ ಡೌನ್‌ಲೋಡ್‌ ಮಾಡಿಕೊಂಡಲ್ಲಿ, ಇದರ ಟ್ರಿಪ್ಪರ್‌ ನ್ಯಾವಿಗೇಟರ್‌ ನಿಮಗೆ ನೀವು ನಮೂದಿಸಿದ ಗಮ್ಯಕ್ಕೆ ದಾರಿ ತೋರಿಸುತ್ತದೆ.

ಈ ಬೈಕ್ 9 ಬಣ್ಣಗಳಲ್ಲಿ ಲಭ್ಯವಿದೆ. ಬಿಳಿ, ಹಸಿರು, ನೀಲಿ, ಗ್ರಾನೈಟ್‌, ಕೆಂಪು, ಬೂದು, ಸಿಲ್ವರ್‌, ಗ್ರಾವಲ್‌ ಗ್ರೇ ಮತ್ತು ಕಪ್ಪು ಬಣ್ಣಗಳಲ್ಲಿ ನಿಮಗೆ ಸಿಗಲಿದೆ.

411 ಸಿಸಿಯ ಈ ಬೈಕ್‌ ಒಟ್ಟು 199 ಕೆಜಿ ತೂಕ ಇದೆ. ಜೊತೆಗೆ,ಹ್ಯಾಂಡಲ್‌ಗಳು ಕೂಡ ತುಂಬಾ ಸ್ಟಿಫ್‌ ಇದೆ. ಹ್ಯಾಂಡಲ್‌ ತಿರುಗಿಸಿದಾಗ ವಿಂಡ್‌ಶೀಲ್ಡ್‌ ಮತ್ತು ಮುಂದಿನ ಭಾಗ ಸಂಪುರ್ಣವಾಗಿ ತಿರುಗುವುದಿಲ್ಲ ಇದು ಮೊದಲ ಬಾರಿಗೆ ಈ ವಾಹನ ಚಾಲನೆ ಮಾಡುವವರಿಗೆ ಸವಾಲಾಗಿ ಪರಿಣಮಿಸಬಹುದು.

ಇದರಲ್ಲಿ 80-120 ಕಿಮೀ ವೇಗದಲ್ಲಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಇದರ ಬೆಲೆ 2.01 ಲಕ್ಷ ರೂ.ಗಳಷ್ಟಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!