Tuesday, May 14, 2024
HomeAuto Newsಆಡಿ ಇ-ಟ್ರಾನ್‌ಗೆ ಗ್ರೀನ್‌ ಕಾರ್‌ ಅವಾರ್ಡ್‌ ಗೌರವ

Related Posts

ಆಡಿ ಇ-ಟ್ರಾನ್‌ಗೆ ಗ್ರೀನ್‌ ಕಾರ್‌ ಅವಾರ್ಡ್‌ ಗೌರವ

ಐಷಾರಾಮಿ ಕಾರು ಆಡಿಯ ಇಂಡಿಯಾದ, ಎಲೆಕ್ಟ್ರಿಕ್‌ ಕಾರು ಆಡಿ ಇ-ಟ್ರಾನ್‌ (Audi E-tron), ಇಂಡಿಯನ್ ಕಾರ್ ಆಫ್ ದಿ ಇಯರ್ (ಐಸಿಓಟಿವೈ) ನೀಡುವ ಗ್ರೀನ್ ಕಾರ್ ಅವಾರ್ಡ್ 2022 ಗೌರವ ಪಡೆದುಕೊಂಡಿದೆ.

ಆಟೋಮೋಟಿವ್ ತಯಾರಕರ ಪರಿಶ್ರಮ, ಪ್ರಯತ್ನಗಳನ್ನು ಗೌರವಿಸಲು ಮತ್ತು ಪ್ರಶಂಸಿಸಲು ಐಸಿಓಟಿವೈ (ICOTY) ಯಿಂದ ಗ್ರೀನ್ ಕಾರ್ ಪ್ರಶಸ್ತಿಯನ್ನು ಕಳೆದ ವರ್ಷ ಪರಿಚಯಿಸಿತ್ತು. ಗ್ರೀನ್‌ ಕಾರು ಪ್ರಶಸ್ತಿಯಲ್ಲಿ ಆಡಿ, ಜಾಗ್ವಾರ್ ಐ-ಪೇಸ್, ಪೋರ್ಷೆ ಟೇಕಾನ್, ಟಾಟಾ ಟಿಗೊರ್ ಇವಿಗಳಿಗೆ ಸ್ಪರ್ಧೆ ನೀಡಿತ್ತು.

ಆಡಿ ಇ-ಟ್ರಾನ್ 104 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿತ್ತು. ಆಡಿ ಇ-ಟ್ರಾನ್ ಜಿಟಿ (Audi E-tron GT) ಎರಡನೇ ಸ್ಥಾನದಲ್ಲಿದೆ ಮತ್ತು ಜಾಗ್ವಾರ್ ಐ-ಪೇಸ್ ಮೂರನೇ ಸ್ಥಾನ ಗಳಿಸಿತು. ICOTY  ತೀರ್ಪುಗಾರ ತಂಡ 17 ಆಟೋಮೋಟಿವ್ ಪತ್ರಕರ್ತರನ್ನು ಒಳಗೊಂಡಿದೆ. ಆಟೋ ಟುಡೆಯ ಸಂಪಾದಕ ಯೋಗೇಂದ್ರ ಪ್ರತಾಫರ್ ಅದರ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾರೆ. ಪ್ರತಿ ತೀರ್ಪುಗಾರರು 25 ಅಂಕಗಳನ್ನು ಹೊಂದಿದ್ದು, ಅದನ್ನು ಕನಿಷ್ಠ ಐದು ವಾಹನಗಳ ನಡುವೆ ವಿತರಿಸುತ್ತಾರೆ.

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ, ಆಡಿ ಇ-ಟ್ರಾನ್ 50 ಮತ್ತು ಆಡಿ ಇ-ಟ್ರಾನ್ 55, ಕ್ರಮವಾಗಿ 1.01 ಕೋಟಿ ರೂ. ಮತ್ತು ರೂ. 1.17 ಕೋಟಿ ರೂ. (ಶೋರೂಂ ದರ) ದರ ಹೊಂದಿದೆ.

ಮರ್ಸಿಡೀಸ್‌ ಬೆನ್ಸ್‌ ಎಸ್‌ ಕ್ಲಾಸ್‌ (Mercedes-Benz S-Class) ICOTY ಯ ಪ್ರೀಮಿಯಂ ಕಾರ್ (premium car award) ಅವಾರ್ಡ್ 2022 ಪ್ರಶಸ್ತಿ ಗೆದ್ದುಕೊಂಡಿದೆ. ಇದು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಾಗಿರುವ ಕಾರಾಗಿದ್ದು, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!