Wednesday, May 15, 2024
HomeAuto Newsಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ ಭಾರಿ ದಂಡ ತೆರಬೇಕಾದೀತು!

Related Posts

ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ ಭಾರಿ ದಂಡ ತೆರಬೇಕಾದೀತು!

DTF News

ಬೆಂಗಳೂರು, ಜೂ.21: ಇನ್ನು ಮುಂದೆ ನೀವು ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ 2 ಸಾವಿರ ರೂ. ದಂಡ ಪಾವತಿಸಬೇಕಾಗಬಹುದು.

ಹೊಸ ಸಂಚಾರಿ ನಿಯಮಗಳ ಪ್ರಕಾರ, ನೀವು ವಾಹನದ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಹ, ನೀವು ದಂಡ ಪಾವತಿಸಬೇಕಾಗಬಹುದು ಮೋಟಾರು ವಾಹನ ಕಾಯ್ದೆಯ (Motor vehicle act) ಪ್ರಕಾರ, ವಾಹನದ ದಾಖಲೆಗಳನ್ನು ಪರಿಶೀಲಿಸುವಾಗ ಅಥವಾ ಯಾವುದೇ ರೀತಿಯಲ್ಲಿ ಜನರು ಟ್ರಾಫಿಕ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ, ನಿಯಮ 179 ಎಂವಿಎ (MVA) ಪ್ರಕಾರ, ನಿಮಗೆ 2000 ರೂ. ದಂಡ ವಿಧಿಸುವ ಅಧಿಕಾರ ಪೊಲೀಸರಿಗಿದೆ.ಅದರಂತೆ ಜನರು ಕೂಡ ದುರ್ವರ್ತನೆ ತೋರುವ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬಹುದು.

ಇನ್ನೊಂದು ವಿಷಯ, ಹೊಸ ಸಂಚಾರ ನಿಯಮಗಳ ಪ್ರಕಾರ ಹೆಲ್ಮೆಟ್ ಧರಿಸಿದ್ದರೂ 2000 ರೂ.ಗಳ ದಂಡ ವಿಧಿಸಬಹುದಾಗಿದೆ. ಏಕೆಂದರೆ, ಹೆಲ್ಮೆಟ್‌ ಜೊತೆಗೆ, ಅದರ ಪಟ್ಟಿಯನ್ನು ಸರಿಯಾಗಿ ಧರಿಸುವುದು ಕೂಡ ಕಡ್ಡಾಯ.ಹೊಸ ಮೋಟಾರು ವಾಹನ ಕಾಯಿದೆಯ ಪ್ರಕಾರ, ಮೋಟಾರ್ ಸೈಕಲ್, ಸ್ಕೂಟರ್ ಚಾಲನೆ ಮಾಡುವಾಗ ಹೆಲ್ಮೆಟ್ ಸ್ಟ್ರಿಪ್ ಧರಿಸದೇ ಇದ್ದರೆ, ನಿಯಮ 194 ಡಿ ಎಂವಿಎ (194D MVA) 1000 ರೂ. ದಂಡ ಮತ್ತು ದೋಷಯುಕ್ತ ಹೆಲ್ಮೆಟ್ ಧರಿಸಿದ್ದರೆ (ಬಿಐಎಸ್ ಇಲ್ಲದೆ) 1000 ರೂ. ದಂಡ ವಿಧಿಸಬಹುದು.

LEAVE A REPLY

Please enter your comment!
Please enter your name here

Latest Posts

error: Content is protected !!