Tuesday, May 14, 2024
HomeCarsಆಟೋ ಎಕ್ಸ್ಪೋ 2023: ಟಾಟಾ ಮೋಟಾರ್ಸ್‌ನಿಂದ ಮೂರು ಇವಿಗಳ ಅನಾವರಣ

Related Posts

ಆಟೋ ಎಕ್ಸ್ಪೋ 2023: ಟಾಟಾ ಮೋಟಾರ್ಸ್‌ನಿಂದ ಮೂರು ಇವಿಗಳ ಅನಾವರಣ

DTF auto news

ನವದೆಹಲಿ, ಜ.12 : ಟಾಟಾ ಮೋಟಾರ್ಸ್ 2023 ಆಟೋ ಎಕ್ಸ್‌ಪೋದಲ್ಲಿ (2023 Auto Expo) ಟಾಟಾ ಹ್ಯಾರಿಯರ್ ಇವಿ, ಸಿಯೆರಾ ಇವಿ, ಆಲ್ಟ್ರೋಜ್ ರೇಸರ್, ಅವಿನ್ಯಾ ಕಾನ್ಸೆಪ್ಟ್ ಮತ್ತು ಕರ್ವ್ವಿ ಕೂಪೆ ಸೇರಿದಂತೆ ಹಲವು ಕಾರುಗಳನ್ನು ಅನಾವರಣಗೊಳಿಸಿತು.

ಟಾಟಾ ಸಿಯೆರಾ ಇವಿ (Tata Sierra EV)

ಟಾಟಾ ಮೋಟಾರ್ಸ್ ಸಿಯೆರಾ EV ಅನ್ನು ಪ್ರದರ್ಶಿಸಿದೆ. ಇದು ಬಹುತೇಕ ಉತ್ಪಾದನೆಗೆ ಸಿದ್ಧವಾಗಿದೆ. ಎಲ್ಲಾ ಹೊಸ ಮಾದರಿಯು ಮುಂದಿನ ಎರಡು ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಸಿಯೆರಾ EV ಹೊಸ ಮುಚ್ಚಿದ ಗ್ರಿಲ್ ಮತ್ತು ಬೃಹತ್ ಬಂಪರ್‌ನೊಂದಿಗೆ ಬರಲಿದೆ.

ಟಾಟಾ ಹ್ಯಾರಿಯರ್ ಇವಿ (Tata Harrier EV)

ಟಾಟಾ ಹ್ಯಾರಿಯರ್ EV ಹಿಂದಿನ ಹ್ಯಾರಿಯರ್‌ನಂತೆಯೇ ಕಾಣುತ್ತದೆ. ಆದರೆ ಇದು ಹೆಚ್ಚಿನ ಕ್ಲೀನರ್ ಲೈನ್‌ಗಳು ಮತ್ತು ಮುಚ್ಚಿದ ಗ್ರಿಲ್‌ ಮತ್ತು ಹೊಸ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಅನ್ನು ಹೊಂದಿದೆ. ಟಾಟಾ ಹ್ಯಾರಿಯರ್ EV ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಇದು AWD ವಾಹನವಾಗಿದೆ. ಡ್ಯುಯಲ್-ಮೋಟಾರ್ ಸೆಟ್-ಅಪ್ ಹೊಂದಿದೆ ಎಂಬುದು ತಿಳಿದುಬರುತ್ತದೆ.

ಟಾಟಾ ಆಲ್ಟ್ರೋಜ್ ರೇಸರ್(Tata Altroz)

Tata Altroz i-Turbo ಪರಿಚಯಿಸಿದ ನಂತರ, ಟಾಟಾ ಮೋಟಾರ್ಸ್ Altroz ರೇಸರ್ ಅನ್ನು ಅನಾವರಣಗೊಳಿಸಿದೆ. ಇದು ಹ್ಯುಂಡೈ i20 N-ಲೈನ್‌ನಂತೆಯೇ ಇದ್ದು, ಹೊಸ ಆಲ್ಟ್ರೋಜ್ ರೇಸರ್ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದೆ. ಇದು ಗರಿಷ್ಟ 120 PS ಪವರ್ ಮತ್ತು 170 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಕರ್ವ್ (Tata Curvv)

2024 ರಲ್ಲಿ Tata Curvv ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಇದು ಕೂಡ ಹೊಸ ವಿನ್ಯಾಸದ ಗ್ರಿಲ್ ಮತ್ತು ಹಲವು ಬದಲಾವಣೆಗಳೊಂದಿಗೆ ಬರಲಿದೆ. ಹೊಸ ಡಿಜಿಟಲ್‌ ವಿನ್ಯಾಸಕ್ಕೆ ಇದು ಸಾಕ್ಷಿಯಾಗಲಿದೆ. ಇಳಿಜಾರಾದ ನಾಚ್‌ಬ್ಯಾಕ್ ಶೈಲಿಯ ಹಿಂಭಾಗ ಮತ್ತು ಸ್ಕ್ವೇರ್ಡ್ ಆಫ್ ವೀಲ್ ಆರ್ಚ್‌ಗಳನ್ನು ಪಡೆಯುತ್ತದೆ. ಕರ್ವಿವ್‌ನ ಪವರ್‌ಟ್ರೇನ್ ವಿವರಗಳನ್ನು ಟಾಟಾ ಇನ್ನೂ ಖಚಿತಪಡಿಸಿಲ್ಲ.

ಟಾಟಾ ಅವಿನ್ಯಾ (Tata Avinya)
ಟಾಟಾ 2023 ಆಟೋ ಎಕ್ಸ್‌ಪೋದಲ್ಲಿ ಎಲ್ಲಾ ಹೊಸ ಅವಿನ್ಯಾ ಪರಿಕಲ್ಪನೆಯನ್ನು ಪ್ರದರ್ಶಿಸಿದೆ. ಜೆನ್‌ 3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಆಲ್‌-ನ್ಯೂ ಕಾರು ಅದರ ಬಾರ್ನ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನೊಂದಿಗೆ ಕನಿಷ್ಠ 500 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದು 2025 ರಲ್ಲಿ ಬಿಡುಗಡೆಯಾಗಲಿದೆ ಎಂದು ಟಾಟಾ ದೃಢಪಡಿಸಿದೆ. ಆದರೆ, ವಾಹನದ ಕುರಿತು ಯಾವುದೇ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.

LEAVE A REPLY

Please enter your comment!
Please enter your name here

Latest Posts

error: Content is protected !!