Wednesday, May 15, 2024
HomeCarsಟಾಟಾ ನೆಕ್ಸಾನ್‌ಗೆ ಹೆಚ್ಚಿದ ಬೇಡಿಕೆ: ಮೇ ತಿಂಗಳಲ್ಲಿ ದಾಖಲೆಯ ಮಾರಾಟ

Related Posts

ಟಾಟಾ ನೆಕ್ಸಾನ್‌ಗೆ ಹೆಚ್ಚಿದ ಬೇಡಿಕೆ: ಮೇ ತಿಂಗಳಲ್ಲಿ ದಾಖಲೆಯ ಮಾರಾಟ

DTF news

ಬೆಂಗಳೂರು, ಜೂ.21,2022: ಕಳೆದ ಕೆಲವು ತಿಂಗಳುಗಳಿಂದ ದೇಶದ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors) ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಹೆಚ್ಚಿನ ಗ್ರಾಹಕರು ಟಾಟಾ ನೆಕ್ಸಾನ್‌ಗೆ (Tata Nexon) ಒಲವು ತೋರುತ್ತಿದ್ದಾರೆ.

ಇದಕ್ಕೆ ಪ್ರಮುಖ ಕಾರಣ ಅದರಲ್ಲಿನ ಸುರಕ್ಷತಾ ಅಂಶಗಳು. ಗ್ಲೋಬಲ್ ಎನ್‌ಸಿಎಪಿ (Gobal NCAP) ನಿಂದ ಸುರಕ್ಷತೆಗಾಗಿ ಬಹುತೇಕ ಎಲ್ಲಾ ಟಾಟಾ ಕಾರುಗಳು 4 ರಿಂದ 5 ಸ್ಟಾರ್‌ಗಳನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಟಾಟಾ ನೆಕ್ಸಾನ್ ಮೇ ತಿಂಗಳಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಂಬರ್-1 ಸ್ಥಾನದಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿದೆ. ಟಾಟಾ ನೆಕ್ಸಾನ್ 2022 ರ ಮೇನಲ್ಲಿ ಒಟ್ಟು 16,614 ವಾಹನಗಳನ್ನು ಮಾರಾಟ ಮಾಡಿದ್ದರೆ, ಮಾರುತಿ ವ್ಯಾಗನ್ಆರ್ 16,814 ವಾಹನಗಳನ್ನು ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದೆ. ಈ ಕಾರುಗಳ ನಡುವೆ ಇರುವುದು ಕೇವಲ 200 ವಾಹನಗಳ ಅಂತರವಷ್ಟೇ.

ಮೇ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು:

ಮಾರುತಿ ವ್ಯಾಗನ್‌ ಆರ್‌ ( 16,814), ಟಾಟಾ ನೆಕ್ಸಾನ್‌ (16,614), ಮಾರುತಿ ಸ್ವಿಫ್ಟ್‌ (14,133), ಮಾರುತಿ ಬಲೆನೋ (13,970), ಮಾರುತಿ ಆಲ್ಟೋ ( 12,933)   ಮಾರುತಿ ಎರ್ಟಿಗಾ (12,226),  ಮಾರುತಿ ಡಿಸೈರ್ (11,603), ಹ್ಯುಂಡೈ ಕ್ರೇಟಾ (10,973), ಮಾರುತಿ ಎಕೋ (10,482), ಮಾರುತಿ ಬ್ರೀಜಾ (10,312)

LEAVE A REPLY

Please enter your comment!
Please enter your name here

Latest Posts

error: Content is protected !!