Tuesday, May 14, 2024
HomeElectric Vehicleಬಿಡುಗಡೆಯಾದ ಕೆಲವು ತಿಂಗಳಲ್ಲೇ ಬೂಮ್ ‘ಕಾರ್ಬೆಟ್’ ಇ-ಬೈಕ್ಗೆ 36 ಸಾವಿರ ಬುಕಿಂಗ್!

Related Posts

ಬಿಡುಗಡೆಯಾದ ಕೆಲವು ತಿಂಗಳಲ್ಲೇ ಬೂಮ್ ‘ಕಾರ್ಬೆಟ್’ ಇ-ಬೈಕ್ಗೆ 36 ಸಾವಿರ ಬುಕಿಂಗ್!

DTF News

ಬೆಂಗಳೂರು, ಡಿ 30: ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ತಮಿಳುನಾಡಿನ ಕೊಯಮತ್ತೂರು ಮೂಲದ ಬೂಮ್‌ ಮೋಟಾರ್ಸ್‌(Boom Motors) ಬಿಡುಗಡೆಗೊಳಿಸಿದ ಬೂಮ್‌ ಕಾರ್ಬೆಟ್‌ (Corbett) ಹೈಟೆಕ್‌ ಇವಿ ಬ್ರ್ಯಾಂಡ್‌ ,36 ಸಾವಿರ ಬುಕಿಂಗ್‌ ಪಡೆದುಕೊಂಡಿದೆ. ಈ ಕುರಿತು ಕಂಪನಿ ಮಾಹಿತಿ ನೀಡಿದ್ದು 2022ರ ಜನವರಿ ವೇಳೆಗೆ ಡೀಲರ್‌ ಬಳಿ ತಲುಪಲಿದೆ ಎಂದು ತಿಳಿಸಿದೆ.

ಈ ಸ್ಕೂಟರ್‌ ಹಾಗೂ ಮೊಬೆಡ್‌ ಎರಡೂ ಆಕಾರ ಹೊಂದಿರುವ ಮೊಬೈಕ್ ಬದಲಿಸಬಹದಾದ ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಮಡಿದೆ ಜೊತೆಗೆ, ಬೂಮ್‌ ಮೋಟಾರ್ಸ್‌ ದೇಶಾದ್ಯಂತ 60ಕ್ಕೂ ಹೆಚ್ಚು ಡೀಲರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2022ರ ಅಂತ್ಯದ ವೇಳೆ ಇದಕ್ಕೆ 250 ಡೀಲರ್‌ಗಳಿಗೆ ಹೆಚ್ಚಿಸಲು ಯೋಜನೆ ರೂಪಿಸಿದೆ.

ತನ್ನ ಮೊದಲ ವಾಹನದಲ್ಲೇ ಯಶಸ್ಸು ಕಂಡಿರುವ ಕಂಪನಿ, ಮುಂದಿನ ಒಂದು ವರ್ಷದಲ್ಲಿ ಒಂದು ಲಕ್ಷಕ್ಕೂ ಮೀರಿ ವಾಹನಗಳ ಮಾರಾಟ ಮಾಡುವ ಗುರಿ ಹೊಂದಿದೆ ಎಂದು ಬೂಮ್ ಮೋಟಾರ್ಸ್‌ನ ಪ್ರತಿನಿಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸದ್ಯ ಇದು ವರ್ಷಕ್ಕೆ 1 ಲಕ್ಷ ಬೈಕ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಕಾರ್ಬೆಟ್ ಯಶಸ್ಸಿನೊಂದಿಗೆ ಕಂಪನಿಯು ವಹಿವಾಟು 400 ಕೋಟಿ ರೂ.ಗಳಿಗೂ ಹೆಚ್ಚಾಗಿದ್ದು, ಇವಿ ಸ್ಟಾರ್ಟಪ್‌  ಕಂಪನಿಗೆ ಇದೊಂದು ಬಹುದೊಡ್ಡ ಮೈಲಿಗಲ್ಲಾಗಿದೆ. ಈ ಕುರಿತು ಹೇಳಿಕೆ ನಿಡಿರುವ ಕಂಪನಿಯ ಸಿಇಒ ಮತ್ತು ಸಹ-ಸಂಸ್ಥಾಪಕ ಅನಿರುತ್ ರವಿ ನಾರಾಯಣನ್,  “ಬೂಮ್ ಕಾರ್ಬೆಟ್‌ಗೆ ಬಂದ ಸ್ಪಂದನೆಯಿಂದ ಸಂತಸಗೊಂಡಿದ್ದೇವೆ. ಇದು ಜನರು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ” ಎಂದಿದ್ದಾರೆ.

“ಜನರು ನಮ್ಮ ಉತ್ಪನ್ನದಲ್ಲಿ ಮತ್ತು ಕಂಪನಿಯ ದೃಷ್ಟಿಯಲ್ಲಿ ಅಪಾರ ನಂಬಿಕೆ ತೋರಿಸಿದ್ದಾರೆ. ಕಂಪನಿ  ಸುಸ್ಥಿರ ಚಲನಶೀಲತೆಯನ್ನು ಒದಗಿಸುವ ಗುರಿ ಹೊಂದಿದೆ. ಈಗ ಗ್ರಾಹಕರಿಗೆ ಶೀಗ್ರದಲ್ಲೇ ವಾಹನಗಳನ್ನು ಶ್ರಮಿಸಲಿದ್ದೇವೆ” ಎಂದಿದ್ದಾರೆ.

ದೀರ್ಘಬಾಳಿಕೆಯ ಮೊಬೈಕ್‌ ಆಗಿರುವ ಕಾರ್ಬೆಟ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಕಾರ್ಬೆಟ್ 14 ಮತ್ತು 14- ಎಕ್ಸ್ (EX)  ಎಂಬ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದೆ. ಇದು 2.3 ಕೆಡಬ್ಲ್ಯುಎಚ್‌ (kWh) ಬ್ಯಾಟರಿ ಒಳಗೊಂಡಿದ್ದು, ಬಯಸಿದಲ್ಲಿ ಅದನ್ನು 4.6 ಕೆಡಬ್ಲ್ಯುಎಚ್‌ಗೆ ಹೆಚ್ಚಿಸಬಹುದು. ಒಂದು ಚಾರ್ಜ್ಗೆ 200 ಕಿಲೋಮೀಟರ್‌ಚಲಿಸುವ ಸಾಮರ್ಥ್ಯ ಹೊಂದಿದೆ.

ಇದು ಬದಲಿಸಬಲ್ಲ ಬ್ಯಾಟರಿ ಮತ್ತು ಪೋರ್ಟಬಲ್ ಚಾರ್ಜರ್‌ನೊಂದಿಗೆ ಬರುತ್ತವೆ. ಇದನ್ನು ನಿಮ್ಮ ಮನೆಯ ಯಾವುದೇ ಎಲೆಕ್ಟ್ರಿಕ್‌ ಸಾಕೆಟ್‌ಗೆ ಪ್ಲಗ್ ಮಾಡಬಹುದಾಗಿದೆ. ಇದು ಈ ಬೈಕ್‌ನ ಅನುಕೂಲಕರ ಅಂಶವಾಗಿದೆ. ಸುಮಾರು 2.5 ರಿಂದ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಜೊತೆಗೆ, ಕಾರ್ಬೆಟ್ 14 ಗಂಟೆಗೆ 65 ಕಿಮೀ ವೇಗದ ನೀಡುತ್ತದೆ. ಆದರೆ 14-ಇಎಕ್ಸ್ ಗಂಟೆಗೆ 75 ಕಿಮೀ ತಲುಪಬಲ್ಲದು. ಗರಿಷ್ಠ 200 ಕೆಜಿ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಬೈಕ್ ಕಡಿದಾದ ಇಳಿಜಾರು ರಸ್ತೆಗಳಲ್ಲಿ ಕೂಡ ಆರಾಮಾಗಿ ಚಲಿಸಬಲ್ಲದು.. ಹೈ-ಟೆನ್ಸೈಲ್ ಸ್ಟೀಲ್‌ನಿಂದ ಮಾಡಿದ ಎಕ್ಸೋ-ಸ್ಕೆಲಿಟಲ್ ಡಬಲ್-ಕ್ರೇಡಲ್ ಚಾಸಿಸ್‌ನೊಂದಿಗೆ ಬೈಕ್ ಅನ್ನು ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.

ಈ ಬೈಕ್‌ನಲ್ಲಿ ಅಪಘಾತ, ಕಳ್ಳತನದ ಅಲರ್ಟ್‌ ನೀಡುವ ವ್ಯವಸ್ಥೆ ಇದೆ. ಅಲ್ಲದೆ, ಪೇರೆಂಟ್‌ ಮೋಡ್‌ನಂತಹ ಸೌಲಭ್ಯಗಳು ಕೂಡ ಇದೆ. ಮಕ್ಕಳು ಇದನ್ನು ಚಾಲನೆ ಮಾಡುತ್ತಿದ್ದರೆ, ಇದರ ವೇಗ ನಿಯಂತ್ರಿಸಬಹುದಾಘಿದೆ.  ಕಾರ್ಬೆಟ್‌ 14ರ ಬೆಲೆ 86,999 ರೂ.ಗಳಿಂದ ಮತ್ತು 14-ಎಕ್ಸ್‌ನ ಬೆಲೆ 1,19,999 ರೂ.ಗಳಿಂದ ಆರಂಭವಾಗಲಿದೆ.

ಬೂಮ್ ಮೋಟಾರ್ಸ್ ತನ್ನ ವಾಹನಗಳ ಖರೀದಿಗೆ 5 ವರ್ಷಗಳ ಇಎಂಐ ನೀಡುತ್ತಿರುವ ಮೊದಲ ಇವಿ ಕಂಪನಿಯಾಗಿದೆ. ಜನರು ತಿಂಗಳಿಗೆ 1,699 ರೂ. ಇಎಂಐ ಆಧಾರದ ಮೇಲೆ ಈ ಬೈಕ್‌ ಖರೀದಿಸಬಹುದು. ಇದು ಜನರು ಪೆಟ್ರೋಲ್‌ಗೆ ವೆಚ್ಚ ಮಾಡುವುದಕ್ಕಿಂತ ಕಡಿಮೆಯಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!