Tuesday, May 14, 2024
HomeAuto Newsಭಾರತದಲ್ಲಿ ಉತ್ಪಾದನೆ ಹೆಚ್ಚಿಸಲಿರುವ ಹೀರೋ ಎಲೆಕ್ಟ್ರಿಕ್‌: 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪನೆ

Related Posts

ಭಾರತದಲ್ಲಿ ಉತ್ಪಾದನೆ ಹೆಚ್ಚಿಸಲಿರುವ ಹೀರೋ ಎಲೆಕ್ಟ್ರಿಕ್‌: 4 ಹೊಸ ಇವಿ ಉತ್ಪಾದನಾ ಘಟಕ ಸ್ಥಾಪನೆ

ಹೀರೋ ಎಲೆಕ್ಟ್ರಿಕ್ (Hero Electric) ಭಾರತದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದ್ದು, ನಾಲ್ಕು ಇವಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಕಂಪನಿಯ ಉತ್ಪಾದನಾ ಸಾಮರ್ಥ್ಯ 5 ಮಿಲಿಯನ್ ವಾಹನಗಳಿಗೆ ಹೆಚ್ಚಾಗಲಿದೆ.

 ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹೀರೋ ಎಲೆಕ್ಟ್ರಿಕ್‌ಗೆ 1,500-2,000 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ದಕ್ಷಿಣದಲ್ಲಿ ಎರಡು ಗ್ರೀನ್‌ಫೀಲ್ಡ್  ಕಾರ್ಖಾನೆಗಳನ್ನು ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ

ಈ ಕುರಿತು ಪ್ರತಿಕ್ರಿಯಿಸಿರುವ ಹೀರೋ ಎಲೆಕ್ಟ್ರಿಕ್‌ನ ವ್ಯವಸ್ಥಾಪಕ ನಿರ್ದೇಶಕ (MD) ನವೀನ್ ಮುಂಜಾಲ್, ಭಾರತದಲ್ಲಿ ಜನರು ಇವಿಗಳಿಗೆ ಬದಲಾಗುತ್ತಿದ್ದಾರೆ. ಈ ಪರಿವರ್ತನೆ ತ್ವರಿತವಾಗಿ ನಡೆಯುತ್ತಿದೆ. 2025 ರ ವೇಳೆಗೆ ಭಾರತದ ಶೇ.30ರಷ್ಟು ದ್ವಿಚಕ್ರ ವಾಹನದ ಮಾರುಕಟ್ಟೆ ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತನೆಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ 2,50,000 ಯುನಿಟ್‌ಗಳ ಸಾಮರ್ಥ್ಯದೊಂದಿಗೆ, ಹೀರೋ ಎಲೆಕ್ಟ್ರಿಕ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.  ಈ ಕಾರಣಕ್ಕಾಗಿ ಭಾರತ ಹೊಸ ಉತ್ಪಾದನಾ ಘಟಕಗಳು ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!