Tuesday, May 14, 2024
HomeReviewಕೈಗೆಟಕುವ ದರದಲ್ಲಿ ಐಷಾರಾಮಿ ಕಾರು - ಕಿಯಾ ಸೋನೆಟ್‌

Related Posts

ಕೈಗೆಟಕುವ ದರದಲ್ಲಿ ಐಷಾರಾಮಿ ಕಾರು – ಕಿಯಾ ಸೋನೆಟ್‌

ಬೆಂಗಳೂರು: ಇದು ದುಬಾರಿ ಐಷಾರಾಮಿ ಕಾಲವಲ್ಲ. ಬದಲಿಗೆ, ಕೈಗೆಟಕುವ ದರದಲ್ಲಿಯೇ ಐಷಾರಾಮಿ ಸೌಲಭ್ಯಗಳನ್ನೊಳಗೊಂಡ ಕಾರುಗಳ ಕಾಲ!

ಈ ಬದಲಾದ ಬೇಡಿಕೆಯ ನಡುವೆಯೇ ಹೊಸ ವಿನ್ಯಾಸ, ಸಾಮರ್ಥ್ಯದೊಂದಿಗೆ ಬಂದಿರುವ ಕಿಯಾ ಸೋನೆಟ್‌ ಜಿಟಿಎಕ್ಸ್‌ ಪ್ಲಸ್‌ 10. ಐಎಂಟಿ ಜನರ ಗಮನ ಸೆಳೆಯುತ್ತಿದೆ. ಇದರಲ್ಲಿ ಜನಸಾಮಾನ್ಯರಿಗೆ ತಲುಪುವ ಕೈಗೆಟಕುವ ದರದಲ್ಲಿ ದುಬಾರಿ ಕಾರುಗಳ ಐಷಾರಾಮಿ ಹಾಗೂ ಆರಾಮದಾಯಕ ಸೌಲಭ್ಯಗಳನ್ನು ನೀಡಲಾಗಿದೆ.

ನಾಲ್ಕು ಅಥವಾ ಐದು ಸದಸ್ಯರುಳ್ಳ ಕುಟುಂಬಕ್ಕೆ ಇದು ಉಪಯುಕ್ತ ಹೂಡಿಕೆಯಾಗಲಿದೆ. ಕೇವಲ ಹೆದ್ದಾರಿ ಪ್ರಯಾಣಗಳಿಗೆ ಮಾತ್ರವಲ್ಲದೆ, ನಗರ ಸಂಚಾರಿ ದಟ್ಟಣೆಯಲ್ಲಿ ಕೂಡ ಇದು ಮೃದು ಹಾಗೂ ಆರಾಮ ಚಾಲನೆಯ ಅನುಭವ ನೀಡುತ್ತದೆ. ಕ್ಲಚ್‌ ರಹಿತ ಗೇರ್‌ ಅಳವಡಿಕೆ ಚಾಲಕರ ಕೆಲಸವನ್ನು ಸುಲಭವಾಗಿಸುತ್ತದೆ. ಹಠಾತ್‌ ಬ್ರೇಕ್‌  ಹಾಗೂ ವೇಗ ಹೆಚ್ಚಳದ ವ್ಯವಸ್ಥೆಯಿದ್ದರೂ, ಪ್ರಯಾಣಿಕರಿಗೆ ಕಾರಿನ  ಹೊಯ್ದಾಟದ ಕಿಂಚಿತ್ತೂ ಅನುಭವ ಆಗುವುದಿಲ್ಲ.

ಒಳಾಂಗಣ ವಿನ್ಯಾಸ ವಿಶೇಷ ಎನಿಸುತ್ತಿದೆಯಾದರೂ, ಹಿಂದಿನ ಪ್ರಯಾಣಿಕರಿಗೆ ಅಗತ್ಯ ಸ್ಥಳಾವಕಾಶ ಇಲ್ಲದಿರುವುದು ಒಂದು ಕೊರತೆಯಾಗಿದೆ. ಆದರೆ, ಕಾರಿನ ಹಿಂಭಾಗದಲ್ಲಿ ಹೆಚ್ಚು ಸ್ಥಳವಿರುವುದರಿಂದ ಲಗೇಜ್‌ ಇರಿಸಲು ಅನುಕೂಲಕರಾಗಿದೆ.

45 ಲೀಟರ್‌ ಇಂಧನ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ 18.2 ಕಿಮೀ ಮೈಲೇಜ್‌ ನೀಡುತ್ತದೆ.

ಕಿಯಾ ಸೋನೆಟ್‌ ಜಿಟಿಎಕ್ಸ್‌ ಪ್ಲಸ್‌ 10. ಐಎಂಟಿ ವೈಶಿಷ್ಟ್ಯಗಳು:

  • ಆರು ಗೇರುಗಳ ಕ್ಲಚ್‌ ರಹಿತ ವಾಹನ
  • ಶೋರೂಂ ದರ 12 ಲಕ್ಷ ರೂ. ಆನ್‌ರೋಡ್‌ ದರ 14 ಲಕ್ಷ ರೂ.
  • 998 ಸಿಸಿ ತೂಕದ ಜಿ 1.0 ಜಿಡಿಐ ಇಂಜಿನ್‌
  • 3 ಇನ್‌ಲೈನ್‌ ಸಿಲಿಂಡರ್‌ಗಳು, 4 ವಾಲ್ವ್‌, ಸಿಲಿಂಡರ್‌, ಡಿಒಎಚ್‌ಸಿ
  • 118 ಬಿಎಚ್‌ಪಿ ಮತ್ತು 6000 ಆರ್‌ಪಿಎಂ ಪವರ್
  • 172 ಎನ್‌ಎಂ ಗರಿಷ್ಠ ಟಾರ್ಕ್, 15000 ಆರ್‌ಪಿಎಂ

LEAVE A REPLY

Please enter your comment!
Please enter your name here

Latest Posts

error: Content is protected !!