Wednesday, May 15, 2024
HomeCarsಕಾರಿಗೆ ಟಿಂಟೆಡ್‌ ಗ್ಲಾಸ್‌; ತೆಲುಗು ನಟ ಅಲ್ಲು ಅರ್ಜುನ್‌ಗೂ ಬಿತ್ತು ದಂಡ!

Related Posts

ಕಾರಿಗೆ ಟಿಂಟೆಡ್‌ ಗ್ಲಾಸ್‌; ತೆಲುಗು ನಟ ಅಲ್ಲು ಅರ್ಜುನ್‌ಗೂ ಬಿತ್ತು ದಂಡ!

DTF news,

ಬೆಂಗಳೂರು, ಏ.5: ಭಾರತದಲ್ಲಿ ಕಾರುಗಳ ಕಿಟಕಿಗಳಿಗೆ ಸನ್‌ಫಿಲ್ಮ್‌ ಅಥವಾ ಟಿಂಟೆಡ್‌ ಗ್ಲಾಸ್‌ಗಳ ಬಳಕೆ ನಿಷೇಧಿಸಿದ್ದರೂ, ಕಾನೂನುಬಾಹಿರವಾಗಿ ಅದರ ಬಳಕೆ ಮುಂದುವರಿದೇ ಇದೆ. ಕೆಲ ಕಾಲ ಅದನ್ನು ನಿರ್ಲಕ್ಷ್ಯಿಸಿದಂತಿದ್ದ ಪೊಲೀಸರು ಈಗ ಮತ್ತೊಮ್ಮೆ ಕಠಿಣ ಪರಿಶೀಲನೆ ಆರಂಭಿಸಿದ್ದಾರೆ.

ಈಗಲೂ ಅನೇಕ ನಟರು ಮತ್ತು ಸೆಲೆಬ್ರಿಟಿಗಳು ತಮ್ಮ ವಾಹನಗಳ ಮೇಲೆ ಕಪ್ಪು ಬಣ್ಣವನ್ನು ಬಳಸುತ್ತಾರೆ. ಇತ್ತೀಚೆಗೆ ಹೈದರಾಬಾದ್ ಪೊಲೀಸರು ತೆಲುಗು ನಟ ಅಲ್ಲು ಅರ್ಜುನ್‌ ಅವರ ಟಿಂಟೆಡ್‌ ಗ್ಲಾಸ್‌ ಅಳವಡಿಸಿದ್ದ ವೈಯಕ್ತೀಕರಿಸಿದ ರೇಂಜ್‌ ರೋವರ್‌ ಕಾರನ್ನು ತಡೆದು ವಿಚಾರಣೆ ನಡೆಸಿದ್ದಾರೆ.

ಸ್ಥಳದಲ್ಲಿಯೇ ಖುದ್ದು ಪೊಲೀಸರೇ ಸನ್‌ಫಿಲ್ಮ್‌ ಅನ್ನು ತೆಗೆದಿದ್ದಲ್ಲದೆ, ಅಲ್ಲು ಅರ್ಜುನ್‌ಗೆ 700 ರೂ. ದಂಡದ ಚಲನ್‌ ನೀಡಿದ್ದಾರೆ. ನಟ ಸ್ಥಳದಲ್ಲೇ ದಂಡ ಪಾವತಿಸಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ವಿಶೇಷ ಅಭಿಯಾನ ಡೆಸಿ ಎಂಎಲ್ಎ ಸ್ಟಿಕ್ಕರ್, ನಕಲಿ ಸ್ಟಿಕ್ಕರ್ಗಳು ಮತ್ತು ಕಪ್ಪು ಫಿಲ್ಮ್ಗಳನ್ನು ಹೊಂದಿರುವ ಯಾವುದೇ ವಾಹನವನ್ನು ತಡೆದಿದ್ದರು. ಅಂತಹ ಕಾರುಗಳ ಎಲ್ಲಾ ಕಾರು ಮಾಲೀಕರು ಭಾರಿ ದಂಡವನ್ನು ಪಾವತಿಸಿದರು. ಇದಲ್ಲದೆ, ಇನ್ನೊಂದು ಪ್ರಸಂಗದಲ್ಲಿ ನಟ ಕಲ್ಯಾಣ್ ರಾಮ್  ಅವರಿಗೆ ಕೂಡ ದಂಡ ವಿಧಿಸಲಾಗಿದೆ.

ಟಿಂಟೆಡ್‌ ಗ್ಲಾಸ್‌ ಬಳಸುವಂತಿಲ್ಲ:

ಭಾರತದಲ್ಲಿ ಅತಿ ಹೆಚ್ಚು ಉಲ್ಲಂಘಿಸಿದ ಸಂಚಾರಿ ನಿಯಮಗಳಲ್ಲಿ ಈ ಟಿಂಟೆಡ್‌ ಗ್ಲಾಸ್‌ ಅಳವಡಿಕೆ ಕೂಡ ಒಂದು. ದೆಹಲಿ, ಬೆಂಗಳೂರು ಮತ್ತು ಮುಂಬೈನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಜಾರಿ ಸಾಕಷ್ಟು ಕಟ್ಟುನಿಟ್ಟಾಗಿದ್ದರೆ, ಇತರ ಅನೇಕ ನಗರಗಳಲ್ಲಿ, ವಾಹನ ಚಾಲಕರು ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಣ್ಣದ ಕಿಟಕಿಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ. ವಾಹನದೊಳಗೆ ಗೌಪ್ಯವಾಗಿ ನಡೆಯುವ ಅಪರಾಧಗಳನ್ನು ತಡೆಯಲು ಈ ನಿಯಮ ಜಾರಿಗೊಳಿಸಲಾಗಿದೆ.

ದೇಶದ ಪ್ರಧಾನಿ ಸೇರಿದಂತೆ ಭಾರತದ ಯಾವುದೇ ರಾಜಕಾರಣಿಗಳು ತಮ್ಮ ವಾಹನದಲ್ಲಿ ಇಂತಹ ಸೈರನ್ ಮತ್ತು ಫ್ಲಾಷರ್ಗಳನ್ನು ಬಳಸುವಂತಿಲ್ಲ. ಈ ಹಿಂದೆಯೂ ರಾಜಕಾರಣಿಗಳಿಗೆ ದಂಡ ವಿಧಿಸಲಾಗಿದೆ. ಭಾರತದಲ್ಲಿ, ಆಂಬ್ಯುಲೆನ್ಸ್‌ಗಳು ಮತ್ತು ಅಧಿಕೃತ ಪೊಲೀಸ್ ಕಾರುಗಳಂತಹ ತುರ್ತು ವಾಹನಗಳು ಮಾತ್ರ ಸೈರನ್ ಮತ್ತು ಸ್ಟ್ರೋಬ್‌ಗಳನ್ನು ಬಳಸಲು ಅನುಮತಿ ಹೊಂದಿವೆ.

LEAVE A REPLY

Please enter your comment!
Please enter your name here

Latest Posts

error: Content is protected !!